My Podcast Site

ವಿಡಿಯೊ ವಿಭಾಗ

ಒಂದು ಅಪರೂಪದ ಪಿ ಬಿ ಎಸ್ ಹಾಡು

ಹಿಂದಿಯ ಆಜಾದ್ ನ ಕನ್ನಡ ಅವತರಣಿಕೆ ಬೆಟ್ಟದ ಕಳ್ಳ ಚಿತ್ರದಲ್ಲಿ ಪಿ ಬಿ ಎಸ್ ಮತ್ತು ಜಿಕ್ಕಿ ಹಾಡಿದ ಹಾಡು.  ಮೂಲತಃ ಕಲ್ಯಾಣ್ ಕುಮಾರ್ ಗಾಗಿ ಹಾಡಿದ ಈ ಹಾಡನ್ನು ದಿಲೀಪ್ ಕುಮಾರ್ ಗಾಗಿ ಹಾಡಿದಂತೆ ಹಿಂದಿ ವಿಡಿಯೊಗೆ ಸಂಯೋಜಿಸಲಾಗಿದ್ದು  ವೀಕ್ಷಣೆಯು ವಿಶಿಷ್ಠ ಅನುಭವ ನೀಡುತ್ತದೆ.  ನೀವೇ ನೋಡಿ ಆನಂದಿಸಿ.    ಹಿಂದಿ ಅವತರಣಿಕೆಯನ್ನು ಹಾಡಿದ ಗಾಯಕರಿಂದಲೂ ಪಿ ಬಿ ಎಸ್ ಕಂಠ ಈ ಹಾಡಿಗೆ ಹೆಚ್ಚು ಹೊಂದಿಕೆಯಾಗುತ್ತದೆ ಎಂದು ಅನ್ನಿಸುವುದಿಲ್ಲವೆ? [youtube=//www.youtube.com/watch?v=RoJF2LM1Zpo]

ದಕ್ಷಿಣ ಕನ್ನಡದ ಕಾಶ್ಮೀರ

ಬೆಳ್ತಂಗಡಿ ತಾಲೂಕಿನ ಆನಂಗಳ್ಳಿ ಹಾಗೂ ಪರಾರಿ ವಾಳ್ಯಗಳಿಗೆ ನೀರುಣಿಸುವ ಮೃತ್ಯುಂಜಯ ನದಿಗೆ ಅಡ್ಡಲಾಗಿ ಪ್ರತಿವರ್ಷ ಕಟ್ಟಲಾಗುವ   ಜಲಬಂಧ ಹಾಗೂ ಕಾಲುವೆಯ ಪರಿಸರದ ಚಿತ್ರಣ. ಈ  ದೃಶ್ಯಾವಳಿಗಳ ಸೌಂದರ್ಯ  ಕಾಶ್ಮೀರ, ಊಟಿ ಯಾ ಕೊಡೈಕನಾಲ್ ಗಳಂತಹ ಯಾವುದೇ ಪ್ರವಾಸೀ ತಾಣಗಳಿಗೆ ಕಮ್ಮಿಯಿಲ್ಲ.  ಆದರೆ  ಕಣ್ಣೆದುರೇ ಇವು ಇರುವುದರಿಂದ ನಮ್ಮ ಗಮನ ಅತ್ತ ಹೋಗುವುದಿಲ್ಲ ಅಷ್ಟೇ. अति परिचयादवज्ञ्: सन्ततगमनात् अनादरो भवति मलये शैलपुरंध्रि चंदनतरुकाष्टमिन्धनम् कुरुते ॥ [youtube=//www.youtube.com/watch?v=Fcz9zxX14Fo]

ಪಾಪಿಯ ಜೀವನ

ಆದರ್ಶ ಸತಿ ಚಿತ್ರದ ಅಪರೂಪದ ಹಾಡು. ಒಂದು ಕಾಲದಲ್ಲಿ ಸರ್ವತ್ರ ಕೇಳಿಬರುತ್ತಿದ್ದು ಈಗ ಅನ್ಯತ್ರ ಅಲಭ್ಯವಾದ ಈ ಹಾಡು ನಿಮಗಾಗಿ. [youtube=//www.youtube.com/watch?v=F3oGaaMPeRQ]

ಅಂಕದ ಪರದೆ

Sing along ಸಾಹಿತ್ಯದೊಡನೆ ಬೆರೆತ ಜೀವ ಚಿತ್ರದ ಮಧುರ ಹಾಡು. ಈ ಚಿತ್ರ ತಮಿಳಲ್ಲಿ ಪಾಲುಂ ಪಳಮುಂ ಹಾಗೂ ಹಿಂದಿಯಲ್ಲಿ ಸಾಥೀ ಹೆಸರಲ್ಲಿ ಬಂದಿತ್ತು. [youtube=//www.youtube.com/watch?v=P2hBzfsd05Y]

ಈ ಮಣ್ಣು ನಮ್ಮದು

ಆರ್ ಎನ್ ಜಯಗೋಪಾಲ್ ಬರೆದ ಈ ಮಣ್ಣು ನಮ್ಮದು ಹಾಡಿನ ಆಕಾಶವಾಣಿ ಮದ್ರಾಸ್ ಕೋರಲ್ ಗ್ರೂಪ್ ಗಾಯನದ original ವರ್ಷನ್ - Sing along ಸಾಹಿತ್ಯದೊಡನೆ. [youtube=//www.youtube.com/watch?v=Ku-w1YHAx9Y]

ಮೃತ್ಯುಂಜಯ

ಮುಂಡಾಜೆಯ ಜೀವ ನದಿ [youtube=//www.youtube.com/watch?v=gSosvsFexxc]

ಕಿರು ತೊರೆಯ ಝರಿ

[youtube=//www.youtube.com/watch?v=cKLoMU2KHfE]

ಹೂವಿಂದ ಹೂವಿಗೆ तितली उडी

ಮಾಳ ಪರಶುರಾಮ ದೇವಳದ ಪರಿಸರದಲ್ಲಿ ಸೆರೆಹಿಡಿದ  ದೃಶ್ಯ [youtube=//www.youtube.com/watch?v=73k8aE3YIWk]

ಸುಧನ್ವ ಮೋಕ್ಷ

ಶ್ರೀನಿವಾಸ ಕಾಕತ್ಕರ್ ಷಷ್ಟ್ಯಬ್ದದ ಸಮಯ ಮುಂಡಾಜೆಯಲ್ಲಿ ನಡೆದ ಸುಧನ್ವ ಮೋಕ್ಷ ಯಕ್ಷಗಾನದ ತುಣುಕುಗಳು. [youtube=//www.youtube.com/watch?v=krN0mW-tCnk]

Copyright 2014 Chidambar Kakathkar. All rights reserved.

Podcast Powered By Podbean

Version: 20230822