My Podcast Site

ಏಕದಂತನೆ ಲಂಬೋದರನೆ

July 26, 2010

ಸುಮಾರು ಮೂವತ್ತು ವರ್ಷಗಳ ಹಿಂದೆ ಅಂದಿನ ಪ್ರಸಿದ್ಧ ಗೀತೆಗಳ ಧಾಟಿಯಲ್ಲಿ  ರಚಿಸಿದ್ದ ಕೆಲವು ಹಾಡುಗಳ ಪೈಕಿ ಒಂದು ಇಲ್ಲಿದೆ .

ಧಾಟಿಗಾಗಿ ಮೂಲ ಹಾಡೂ ಜತೆಗಿದೆ.

ganesh.jpg

ಏಕದಂತನೆ ಲಂಬೋದರನೆ

(ಧಾಟಿ : ರಾಮ್ ಪುರ್ ಹಾ ವಾಸೀ ಹೂಂ ಮೈ)

ಏಕದಂತನೆ ಲಂಬೋದರನೆ ಪಾಶಾಂಕುಶಧರನೆ

ಮೂಷಿಕವಾಹನ ವಿಘ್ನವಿನಾಶಕ ಓ ವಿಘ್ನೇಶ್ವರನೆ

ಓ... ಸ್ತುತಿಸುವೆ ನಿನ್ನನು ದೇವ

ಓ... ಜಗದಲಿ ಎಲ್ಲರ ಕಾವ

ಕಾರ್ಯಾರಂಭದಿ ಎಲ್ಲರೂ ನಿನ್ನನು ಸ್ತುತಿಸುವರು

ಓ... ನಿನ್ನಯ ಅಭಯವ ಪಡೆದೇ ಮುಂದಕೆ ಸಾಗುವರು

ಚೌತಿಯ ಸಮಯದಿ ಮಣ್ಣಿನ ಮೂರ್ತಿಯ ಮಾಡುವರು

ಓ... ವೈಭವದಿಂದಲಿ ಭಕ್ತರು ನಿನ್ನನು ಪೂಜಿಪರು

ಓ ವಿಘ್ನೇಶಾ ತವ ಕೃಪೆಯ  ಕರುಣಿಸಿ ನಿರುತವು ಕಾಯು ಈ ದೀನರನು

ಏಕದಂತನೆ

ಮೋದಕ ಚಕ್ಕುಲಿ ಕಡಬುಗಳೆಲ್ಲವ ನೀತಿಂದೆ

ಓ... ಹೊಟ್ಟೆಗೆ ಹಾವನು ನೀ ಬಿಗಿದಿರುವೆ ಅದಕೆಂದೆ

ಕೈಗಳು ನಾಲ್ಕು ಆನೆಯ ಮೊಗವು ನಿನಗಿಹುದು

ಓ... ಶೂರ್ಪಕರ್ಣನೆ ದಂತವು ಒಂದೇ ಉಳಿದಿಹುದು

ಲಂಬೋದರನೇ...

ಲಂಬೋದರನೇ ಇಹ ಲೋಕದಿ ನಮಗೆ ಅನುದಿನ ಈಯು ನೀ ಸದ್ಬುದ್ಧಿಯನು

ಏಕ ದಂತನೆ

ಧಾಟಿಗಾಗಿ ಕ್ಲಿಕ್ಕಿಸಿ