My Podcast Site

ಶಾಲೆಗೆ ಹೋಗುವ

July 30, 2010

school.jpg

ಶಾಲೆಗೆ ಹೋಗುವ

(ಧಾಟಿ : ಉಮರ್ ಹೈ ಸತ್ರಾ ಸಾಲ್)

ಶಾಲೆಗೆ ಹೋಗುವ ಬನ್ನಿರಿ ಬೇಗನೆ ಗೆಳೆಯರೆ ನಾವೆಲ್ಲ

ಪಾಠವನೋದಿ ಆಟವನಾಡಿ ನಲಿಯುವ ನಾವೆಲ್ಲ

ಓದೋಣ ನಾವೆಲ್ಲ ನಲಿಯೋಣ ನಾವೆಲ್ಲ

ಎಲ್ಲ ಮಕ್ಕಳು ಜತೆಯಾಗಿ ಹಾಡನು ಹಾಡೋಣ

ಕೂಡಿ ನಾವಾಡೋಣ ಕೂಡಿ ನಲಿಯೋಣ

ಸಂತಸದಿಂದ ನಾವು ಎಲ್ಲ ಒಂದೇ ಎನ್ನೋಣ

ಓದೋಣ ನಾವೆಲ್ಲ ನಲಿಯೋಣ ನಾವೆಲ್ಲ

ಗುರುಗಳು ಹೇಳುವ ಮಾತನ್ನು ಧ್ಯಾನದಿ ಕೇಳೋಣ

ಅದರಂತೆ ನಡೆಯೋಣ ಪ್ರಗತಿಯ ಹೊಂದೋಣ

ನಾವೆಲ್ಲರೂ ವಿದ್ಯಾಬುದ್ಧಿಯ ಗಳಿಸುತ ಮೆರೆಯೋಣ

ಓದೋಣ ನಾವೆಲ್ಲ ನಲಿಯೋಣ ನಾವೆಲ್ಲ

ಓದೋಣ ಪಾಠವನು ಪಾಠದ ಸಮಯದಲಿ

ಆಡೋಣ ಆಟವನು ಆಟದ ಸಮಯದಲಿ

ಸಮಯದ ಬೆಲೆಯ ಅರಿಯುತ ನಾವು ಮುಂದಕೆ ಸಾಗೋಣ

ಓದೋಣ ನಾವೆಲ್ಲ ನಲಿಯೋಣ ನಾವೆಲ್ಲ

ಧಾಟಿಗಾಗಿ ಕ್ಲಿಕ್ಕಿಸಿರಿ