My Podcast Site

ನೇಗಿಲ ಯೋಗಿ

August 9, 2010

ಅನ್ನದಾತನನ್ನು ನೆನಸುವ 1972 ರ ರಚನೆ.

farmer.jpg

ನೇಗಿಲ ಯೋಗಿ

(ಧಾಟಿ: ಪ್ಯಾರ್ ದಿವಾನಾ ಹೊತಾ ಹೈ)

ರೈತನಿಂದಲೆ ಎಲ್ಲ ಜನರು ಅನ್ನವನುಣುತಿಹರು

ನಿತ್ಯವು ಅವನು ದುಡಿಯುತಲಿಹನು ಸುರಿಸುತಲಿ ಬೆವರು

ಅವನ ದುಡಿಮೆಯೊಂದೇ ಜನರ ಬಾಳ ಆಧಾರ

ಮರೆಯಬೇಡಿ ಎಂದೂ ನೀವು ಅವನ ಉಪಕಾರ

ಅವನ ಸೇವೆಯ ಮರೆತವರೆಲ್ಲ ದ್ರೋಹಿಗಳಾಗುವರು

ನಿತ್ಯವು ಅವನು ದುಡಿಯುತಲಿಹನು ಸುರಿಸುತಲಿ ಬೆವರು

ಅವನು ನಡೆಸೆ ನೇಗಿಲನ್ನು ಭೂಮಿ ನಗುವುದು

ಅವನ ಶ್ರಮದ ಪ್ರತಿಫಲ ದೊರಕಿ ಜಗವು ಉಳಿವುದು

ರೈತನ ತ್ಯಾಗದ ಕಾರಣದಿಂದಲೆ ಎಲ್ಲರು ಬದುಕುವರು

ನಿತ್ಯವು ಅವನು ದುಡಿಯುತಲಿಹನು ಸುರಿಸುತಲಿ ಬೆವರು

ಸುಳ್ಳು ಕಪಟ ಮೋಸ ಒಂದೂ ಅವನು ಅರಿಯನು

ಭೂಮಿ ತಾಯ ಸೇವೆಯೆ ತನ್ನ ಪೂಜೆ ಎನುವನು

ರೈತನಂತೆಯೆ ಸೇವೆಯ ಮಾಡುವ ಬೇರಿನ್ಯಾರಿಹರು

ನಿತ್ಯವು ಅವನು ದುಡಿಯುತಲಿಹನು ಸುರಿಸುತಲಿ ಬೆವರು

Tune ಗಾಗಿ ಕ್ಲಿಕ್ಕಿಸಿ