My Podcast Site

ನೀ ಎನ್ನ ಸನಿಹದಲಿರಲು

August 2, 2010

ಸುಮಾರು 1976 ರ ವೇಳೆಯ ಒಂದು  romantic mood.

ನೀ ಎನ್ನ ಸನಿಹದಲಿರಲುSMILE.jpg

(ಧಾಟಿ : ತುಮ್ಹಾರಾ ಚಾಹನೆ ವಾಲಾ)

ನೀ ಎನ್ನ ಸನಿಹದಲಿರಲು ಇನ್ನೇನು ಬೇಕೆನಗೆ

ಚಂದಿರನ ಕೆಣಕುತಿದೆ ನಿನ್ನ ಈ ಮುಗುಳುನಗೆ

ನಿನ್ನನ್ನು ಕಂಡ ದಿನ ಅಂದೆ ನಾನು ಮನಸೋತೆ

ಪ್ರೇಮದ ವೀಣೆಯಲಿ ಮೂಡಿತೊಂದು ಹೊಸ ಗೀತೆ

ದೇವನೇ ಕಳಿಸಿದನೇನು ನಿನ್ನನ್ನು  ಈ ಧರೆಗೆ

ಚಂದಿರನ ಕೆಣಕುತಿದೆ ನಿನ್ನ ಈ ಮುಗುಳುನಗೆ

ಈ ಬಾಳ ಹಂದರದಿ ಬಳ್ಳಿಯಂತೆ ಹರಡಿರುವೆ

ನೀ ಎನ್ನ ಜೀವನದ ಜ್ಯೋತಿಯಾಗಿ ಬೆಳಗಿರುವೆ

ತಂಗಾಳಿ ಬೀಸುವ ತೆರದಿ ಓಡೋಡಿ ಬಾ ಬಳಿಗೆ

ಚಂದಿರನ ಕೆಣಕುತಿದೆ ನಿನ್ನ ಈ ಮುಗುಳುನಗೆ

ನನ್ನಾಸೆ ಬಳ್ಳಿಯಲಿ ಅರಳಿ ನಿಂತ ಹೂ ನೀನು

ನನ್ನಲ್ಲಿ ಬೆರೆತಿರುವೆ ಸೇರಿದಂತೆ ಹಾಲ್ಜೇನು

ಎಂದೆಂದು ಅಳಿಯದೆ ಇರಲಿ ಒಲವಿನ ಈ ಬೆಸುಗೆ

ಚಂದಿರನ ಕೆಣಕುತಿದೆ ನಿನ್ನ ಈ ಮುಗುಳುನಗೆ

ಧಾಟಿಗಾಗಿ ಕ್ಲಿಕ್ಕಿಸಿ