My Podcast Site

ನಮ್ಮ ಊರ ಬಸ್ಸು

July 30, 2010

ಶಿಶಿಲಕ್ಕೆ ಓಡಾಡುತ್ತಿದ್ದ ಬಸ್ಸನ್ನು ಮನದಲ್ಲಿರಿಸಿ 1972 ರಲ್ಲಿ ಬರೆದ ಹಾಡು.  ಆದರೆ ನಮ್ಮ ಊರು ಕಲ್ಮಂಜ ಗ್ರಾಮಕ್ಕೆ ಈ 21ನೇ ಶತಮಾನದಲ್ಲೂ ಬಸ್ಸೇ ಇಲ್ಲ!

bus.jpg

ನಮ್ಮ ಊರ ಬಸ್ಸು

(ಧಾಟಿ : ಏಕ್ ಖಬರ್ ಆಯೀ ಸುನೊ)

ಅದೋ ಅಲ್ಲಿ ನಮ್ಮ ಊರ ಬಸ್ಸು ಬಂತು ನೋಡಿ

ನೀವೂ ಸಹ ಹೋಗಬೇಕೆ ಬೇಗ ಬೇಗ ಓಡಿ

ಮೈ ಕೆಂಪು ಕೆಂಪು ಒಳ ಬಣ್ಣ ಹಸಿರು

ಜನರಿಂದ ತುಂಬಿಹುದು ಆ ಬಸ್ಸಿನ ಬಸಿರು

ಆದರೂ ನಾವು ಏರುವೆವು ಹೇಗಾದರೂ ನಿಲ್ಲುವೆವು

ಅಂತೂ ಇಂತು ಪೇಟೆವರೆಗೆ ನಾವು ಹೋಗಿ ಬಿಡುವೆವು

ಇದು ಒಂದೇ ಬಸ್ಸು ಈ ಊರಿಗೆಲ್ಲ

ಅದರಲ್ಲೆ ಹೋಗಬೇಕು ಊರ ಜನರು ಎಲ್ಲ

ಅರ್ಜಿ ನಾವು ಬರೆವೆವು ಸ್ಟ್ರೈಕು ನಾವು ಮಾಡುವೆವು

ನಮ್ಮೂರಿಗೆ ಇನ್ನೂ ಕೆಲವು ಬಸ್ಸು ಬೇಕು ಎನುವೆವು

ಅದರೊಳಗಿನ ಗತಿಯನು ನೋಡಿದವರು ಎಲ್ಲ

ಹೇಳುತಿಹರು ಇದರ ವಿಷಯ ದೇವನೊಬ್ಬ ಬಲ್ಲ

ಸೀಟು ಎಲ್ಲ ಹರಿದಿದೆ ಬಣ್ಣ ಎಲ್ಲ ಹೋಗಿದೆ

ಅದರ ಶಬ್ದ ಕೇಳಿದರೆ ಏನೂ ತಿಳಿಯದಾಗಿದೆ

ಧಾಟಿಗಾಗಿ  Listen Now  ಮೇಲೆ ಕ್ಲಿಕ್ಕಿಸಿ