My Podcast Site

ನನ್ನ ಹಾಡನು ಕೇಳಿರಿ

August 12, 2010

1969ರ ಸುಮಾರಿನಲ್ಲಿ ನಾನು ಬರೆದಿದ್ದ ಪ್ರಥಮ ಹಾಡು ಇದು.

ನನ್ನ ಹಾಡು

(ಧಾಟಿ : ಓ.. ತುಮ್ಸೆ ಅಚ್ಛಾ ಕೌನ್ ಹೈ )

ಓ... ನನ್ನ ಹಾಡನು ಕೇಳಿರಿ

ಕೇಳಿ ಸಂತಸ ಗೊಳ್ಳಿರಿ

ನೀವು ಒಮ್ಮೆ ನಕ್ಕರೆ

ಅದುವೆ ನನಗೆ ಸಕ್ಕರೆ

ನನ್ನ ಹಾಡಲಿ ವಿಷಯವಿಲ್ಲ

ಅದರಲೇನೂ ಸಾರವಿಲ್ಲ

ಅಂತೂ ನೀವು ಕೇಳಿ ನೋಡಿ

ನನ್ನ ಹಾಡಿನ ರೀತಿ ನೋಡಿ

ಏಕೆ ನಾನು ಹಾಡು ಹೇಳುವೆ

ಎಂದು ನಿಮಗೆ ತಿಳಿಯಬೇಡವೆ

ನಿಮ್ಮ ಸಂತಸ ನನಗೆ ಇಷ್ಟ

ಅದಕೆ ನಾನು ಪಡುವೆ ಕಷ್ಟ

ಸಂತಸದಿ ನಾ ಹಾಡು ಹೇಳುವೆ

ನಿಮ್ಮ ಮುಖದ ಭಾವ ನೋಡುವೆ

ನಿಮ್ಮ ಮೊಗವು ಅರಳಿದಾಗ

ಸಾರ್ಥಕವು ನನ್ನ ಶ್ರಮವದೀಗ

ಧಾಟಿಗಾಗಿ ಕ್ಲಿಕ್ಕಿಸಿ