My Podcast Site

ದೇವಿ ರಾಜೇಶ್ವರಿ

August 9, 2010

ಭಜನ್ ಶೈಲಿಯ ಕಿಶೋರ್ ಹಾಡನ್ನು ಆಧರಿಸಿದ ದೇವಿ ಸ್ತುತಿ. 1972 ರ ರಚನೆ.

ದೇವಿ ರಾಜೇಶ್ವರಿ

(ಧಾಟಿ : ಹಮ್ ತುಮ್ ಔರ್ ವೊ ಚಿತ್ರದ ಪ್ರಿಯೆ ಪ್ರಾಣೇಶ್ವರಿ )

ದೇವಿ ರಾಜೇಶ್ವರಿ  ಭುವನೇಶ್ವರಿ

ನಾ ಭಜಿಸುವೆ ನಿನ್ನಯ ನಾಮವನು

ನೀ ಹರಸಮ್ಮಾ ನಮ್ಮೆಲ್ಲರನು

ನೀ ನಂಬಿದವರ ಕೈ ಬಿಡಲಾರೆ

ನಾ ನಿನ್ನನು ಭಜಿಸದೆ ಇರಲಾರೆ

ನಾವೆಲ್ಲರು ನಿನ್ನನು ಸ್ತುತಿಸುವೆವು

ಸುಖ ಸಂತಸವನು ನೀ ಕೊಡು ಬಾರೆ

ಓ ದೇವಿಯೇ .....

ಓ ದೇವಿಯೆ ಮಾಡುವೆ ಪೂಜೆಯನು

ನಾ ಭಜಿಸುವೆ ನಿನ್ನಯ ನಾಮವನು

ನೀ ಹರಸಮ್ಮಾ ನಮ್ಮೆಲ್ಲರನು

ನಾ ಭಾವಪುಷ್ಪವನು ಅರ್ಪಿಸುವೆ

ಮನದಾಳದಿ ನಿನ್ನನು ಅರ್ಚಿಸುವೆ

ಬಾ ಕೊಡು ತಾಯೇ ಸದ್ಬುದ್ಧಿಯನು

ನೀ ಹರಸುವೆ ಎಂದೇ ಭಾವಿಸುವೆ

ಓ ತಾಯಿಯೇ....

ಓ ತಾಯಿಯೆ ಕಾಯು ನೀ ಭಕ್ತರನು

ನಾ ಭಜಿಸುವೆ ನಿನ್ನಯ ನಾಮವನು

ನೀ ಹರಸಮ್ಮಾ ನಮ್ಮೆಲ್ಲರನು

ಧಾಟಿಗಾಗಿ ಕ್ಲಿಕ್ಕಿಸಿ