My Podcast Site

ಸೋಮಾರಿಗೆ ಕರೆ

August 10, 2010

ಸೂರ್ಯವಂಶೀಯರಿಗೊಂದು ಉದಯ ರಾಗ

SLEEP.jpg

ಸೋಮಾರಿಗೆ ಕರೆ

(ಧಾಟಿ : ಲಾಲ್ ಛಡಿ ಮೈದಾನ್ ಖಡಿ)

ಬೆಳಗಾಯಿತು ನೀ ಏಳೀಗ

ಈ ನಸುಕಿನ ನಿದ್ದೆಯ ಬಿಡು ಬೇಗ

ಅದೋ ನೇಸರನು ...

ಅದೋ ನೇಸರನು

ಮೇಲೇರಿಹನು

ನೀ ಆಲಸ್ಯವನು ತೊರೆ ಈಗ

ಹಾರಾಡಲು ತೊಡಗಿವೆ ಹಕ್ಕಿಗಳು

ಆಹಾ ಚಿಲಿಪಿಲಿ ರಾಗವ ಹಾಡುತಲಿ

ಎಳೆಬಿಸಿಲೆಲ್ಲೆಡೆ  ಹರಡಿಹುದು

ಕೆಂಬಣ್ಣವ ಚೆಲ್ಲುತ ಬಾನಿನಲಿ

ಬಾಳುವ ಕಲೆಯನು ಕಲಿಯುವೆ ನೀ  ಕಾಲದ ಬೆಲೆಯನು ತಿಳಿದಾಗ

ಅದೋ ನೇಸರನು ...

ಅದೋ ನೇಸರನು

ಮೇಲೇರಿಹನು

ನೀ ಆಲಸ್ಯವನು ತೊರೆ ಈಗ

ಬೆಳಗಾಯಿತು ನೀ ಏಳೀಗ

ಈ ನಸುಕಿನ ನಿದ್ದೆಯ ಬಿಡು ಬೇಗ

ಓಡಾಟವು ಶುರುವಾಗಿಹುದಿಲ್ಲಿ

ಜನರೆಲ್ಲರು ಕೆಲಸದಿ ತೊಡಗಿಹರು

ನಿದಿರೆಯ ಬಿಡದಿದ್ದರೆ ನೀನು

ಅವರೆಲ್ಲರು ಮುಂದಕೆ ಸಾಗುವರು

ಉಳಿದಲ್ಲೇ ಉಳಿದರೆ ಉಳಿವಿಲ್ಲ ಬಾ ಗುರಿಯನು ಸೇರಲು ನಡೆ ಬೇಗ

ಅದೋ ನೇಸರನು ...

ಅದೋ ನೇಸರನು

ಮೇಲೇರಿಹನು

ನೀ ಆಲಸ್ಯವನು ತೊರೆ ಈಗ

ಬೆಳಗಾಯಿತು ನೀ ಏಳೀಗ

ಈ ನಸುಕಿನ ನಿದ್ದೆಯ ಬಿಡು ಬೇಗ

(9ನೇ ತರಗತಿಯ ಹಿಂದಿ ಪಠ್ಯದಲ್ಲಿದ್ದ  उठ जाग मुसाफिर भॊर भई ಎಂಬ ಕವಿತೆಯ ಸ್ಪೂರ್ತಿಯಿಂದ. ಆ ಕವಿತೆಯನ್ನು ಇದೇ ರಾಗದಲ್ಲಿ  ತರಗತಿಯಲ್ಲಿ ಹಾಡಿ ಉಪಾಧ್ಯಾಯರ ಮೆಚ್ಚುಗೆ ಗಳಿಸಿದ್ದೆ!)

ಧಾಟಿಗಾಗಿ ಕ್ಲಿಕ್ಕಿಸಿ

Podbean App

Play this podcast on Podbean App